Friday, December 5, 2025
HomeNewsಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಯೆತ್ತಿ ಬಿಲ್ಲವ ಈಡಿಗ ನಾಮಧಾರಿ ಸಮಾಜಕ್ಕಾದ...

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಯೆತ್ತಿ ಬಿಲ್ಲವ ಈಡಿಗ ನಾಮಧಾರಿ ಸಮಾಜಕ್ಕಾದ ಅನ್ಯಾಯದ ಬಗ್ಗೆ ತೀಕ್ಷ್ಣವಾಗಿ ವಿರೋಧಿಸಿದ ನಮ್ಮ ಹೆಮ್ಮೆಯ ಶಾಸಕರು ಸುರೇಶ ಶೆಟ್ಟಿ ಗುರ್ಮೆ ರವರಿಗೆ ಅಭಿನಂದನೆಗಳು

ಉಡುಪಿ: ದಿನಾಂಕ 21-3-2025 ರ ವಿಧಾನಸಭೆಯ ಅಧಿವೇಶನದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಕವಿ ಕವಿ ಹೃದಯಿ ಶ್ರೀಯುತ ಸುರೇಶ ಶೆಟ್ಟಿ ಗುರ್ಮೆ ಯವರು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಈಡಿಗ ನಾಮಾಧಾರಿ ಬಿಲ್ಲವ ಸಮಾಜ ಇದ್ದು, ಆರ್ಥಿಕವಾಗಿ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಶ್ರೀ ನಾರಾಯಣಗುರು ನಿಗಮ ಮತ್ತು ಅದಕ್ಕೆ ಅವಶ್ಯಕ ಮೊತ್ತದ ಅನುದಾನ ಬಿಡುಗಡೆಯ ಅಗತ್ಯದ ಬಗ್ಗೆ ಅಧಿವೇಶನದಲ್ಲಿ ಸರಕಾರಕ್ಕೆ ಅರ್ಥವಾಗುವ ನಿಟ್ಟಿನಲ್ಲಿ ಸಮಾಜದ ಪರ ಧ್ವನಿಯೆತ್ತಿ ಸರಕಾರದ ಹಾಗೂ ಸಭಾ ಅಧ್ಯಕ್ಷರ ಗಮನಕ್ಕೆ ತಂದರು.

ಚುನಾವಣಾ ಕಾಲದಲ್ಲಿ ತಮ್ಮ ಜೊತೆ ನಿಂತ ಬಿಲ್ಲವ ಸಮಾಜದ ಅಭಿವೃದ್ಧಿಯ ಬಗ್ಗೆ ಶಾಸಕರಿಗೆ ಇರುವ ಕಾಳಜಿ ಮತ್ತು ಹೃದಯ ವೈಶಾಲ್ಯಾಕ್ಕೆ BSNDP ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀಧರ ಅಮೀನ್ ರವರು ಶ್ಲಾಘಿಸಿದರು, ಈಡಿಗ, ಬಿಲ್ಲವ, ನಾಮಧಾರಿ ಸಮಾಜದ ಪರವಾಗಿ BSNDP ಉಡುಪಿ ಜಿಲ್ಲೆಯ ವತಿಯಿಂದ ಶಾಸಕ ಸುರೇಶ ಶೆಟ್ಟಿ ಗುರ್ಮೆ ಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ಜಿಲ್ಲಾಧ್ಯಕ್ಷರಾದ ಶ್ರೀಧರ ಅಮೀನ್ ರವರು ತಿಳಿಸಿದರು.

News: UdupiPages

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Connect with us

9,600FansLike
112FollowersFollow
2,458FollowersFollow