Saturday, December 6, 2025
HomeNewsಮಹಾಮಾಯ ರಥೋತ್ಸವ ಸಂಪನ್ನ

ಮಹಾಮಾಯ ರಥೋತ್ಸವ ಸಂಪನ್ನ

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರು ಭಜಕರ  ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಮಹಾಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ , ಕನಕಾಭಿಷೇಕ ಗಳು ನಡೆದವು , ಯಜ್ಞ ಮಂಟಪದಲ್ಲಿ ಮಹಾ ಪೂರ್ಣಾಹುತಿ ನೆರವೇರಿತು ಸಾಯಂಕಾಲ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ರಥಾರೋಹಣ ನೆರೆದ ಭಜಕರಿಗೆ ಸೇವಾ ಪ್ರಸಾದ ವಿತರಣೆ ಬಳಿಕ ರಥ ಎಳೆದು ವಿಜೃಂಭಣೆಯಿಂದ ನೆರವೇರಿತು . ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಸಿ . ಎ . ಶ್ರೀನಿವಾಸ್ ಕಾಮತ್ , ಮಾರೂರ್ ಸುಧೀರ್ ಪೈ , ಪ್ರಕಾಶ್ ಕಾಮತ್ , ಅನಂತ್ ಭಟ್ , ಗಣೇಶ್ ಭಟ್ ,  ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು . 

ಚಿತ್ರ : ಮಂಜು ನೀರೇಶ್ವಾಲ್ಯ   

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Connect with us

9,600FansLike
112FollowersFollow
2,458FollowersFollow