Thursday, December 4, 2025
HomeNewsಮಂಜೇಶ್ವರ ಅನಂತೇಶ್ವರ ದೇವಸ್ಥಾನ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ ತಿ

ಮಂಜೇಶ್ವರ ಅನಂತೇಶ್ವರ ದೇವಸ್ಥಾನ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ ತಿ

ಶ್ರೀಮದ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರ ಇದರ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ ತಿ ಹಾಗೂ ಬೆಳ್ಳಿ ಲಾಲ್ಕಿ ಯ 150 ನೇ ವರ್ಷದ ಸಂಭ್ರಮೋತ್ಸವ ಐತಿಹಾಸಿಕವಾಗಿ ಅಪೂರ್ವ ವಿಜೃಂಭಣೆಯಿಂದ ಅವಿಸ್ಮರಣೀಯವಾಗಿ ದೇವಳದ ಸ್ವಯಂ ಸೇವಕರಿಂದ ನೆರವೇರಿತು . ಬೆಳಿಗ್ಗೆ ಬೆಳ್ಳಿ ಪಲ್ಲಕಿ ಹಗಲೋತ್ಸವ , ಮಧ್ಯಾನಃ ಸಮಾಜಭಾಂದವರಿಂದ ಶ್ರೀ ನರಸಿಂಹ ಸ್ತುತಿ ಪಠಣ ದೊಂದಿಗೆ ಪ್ರದಕ್ಷಿಣಾ ಸೇವೆ , ಸಮೃದ್ಧವಾದ ನಿರೀಕ್ಷಣಾ ವಸ್ತುಗಳು ಶ್ರೀ ದೇವರಿಗೆ ವಾದ್ಯ ಘೋಷ್ಠಿಯೊಂದಿಗೆ ಸಮರ್ಪಣೆ ಮಾಡಲಾಯಿತು . ರಾತ್ರಿ ೧೫೦ ನೇ ವರ್ಷದ ಬೆಳ್ಳಿ ಲಾಲಕಿಗೆ ಅಪೂರ್ವ ಅಲಂಕಾರದೊಂದಿಗೆ ಉತ್ಸವ ಹಾಗೂ ಪೂಜಾ ಸೇವೆ , ಉತ್ಸವದಲ್ಲಿ ಅದ್ಧುರಿ ವಾದ್ಯಘೋಷ್ಠಿ , ಕಣ್ಮನ ಸಂತೈಸುವ ವಿಶೇಷ ದೀಪಾರಾಧನೆ ನೆರವೇರಿತು . ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ , ಅರ್ಚಕರು ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು .  

ಚಿತ್ರ : ಮಂಜು ನೀರೇಶ್ವಾಲ್ಯ 

News: Manju Neereshwallya

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Connect with us

9,600FansLike
112FollowersFollow
2,458FollowersFollow